ದೂರವಾಣಿ ಸಂಖ್ಯೆ: 0824- 2416511
ಇಮೇಲ್:fishmarkfedn@gmail.com

ಪ್ರಶಸ್ತಿಗಳು

Award for the best performing in fisheries cooperatives in fisheries sector

 

ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿ. ಮಂಗಳೂರು ವಿಭಾಗದ ರಿಟೇಲ್ ಡೀಲರ್ ಗಳ ಸಮಾವೇಶದಲ್ಲಿ 2022-23 ಸಾಲಿನಲ್ಲಿ ಮಂಗಳೂರು ವಿಭಾಗದಲ್ಲಿ ಅತ್ಯಧಿಕ ಡೀಸೆಲ್ ಮಾರಾಟಕ್ಕಾಗಿ ಸೂಪರ್ ಸೆಲ್ಲರ್ ಪ್ರಶಸ್ತಿಯನ್ನು ಪಡೆಯಲಾಯಿತು

 

 ಇಂಡಿಯನ್ ಆಯಿಲ್ ಕಾರ್ಪೋರೇಶನ್ ಅವಾರ್ಡ್ ಕಾರ್ಯಕ್ರಮ

 

ಶ್ರೀ ಯಶ್‍ಪಾಲ್.ಎ.ಸುವರ್ಣ, ಅಧ್ಯಕ್ಷರು,ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಮಂಗಳೂರು, ಇವರು ರಾಷ್ಟ್ರೀಯ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು.

 

 

2014-15 ರಲ್ಲಿ ಹೈಸ್ಪೀಡ್ ಡೀಸಿಲ್‍ನ ಅತ್ಯಧಿಕ ಮಾರಾಟಕ್ಕಾಗಿ ಪ್ರಶಸ್ತಿ.

ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್, ಮಂಗಳೂರು 2014-15 ರಲ್ಲಿ ಡೀಸಿಲ್‍ನ ಅತ್ಯಧಿಕ ಮಾರಾಟದ ಬಗ್ಗೆ ಐ.ಓ.ಸಿ ಯ ಮಂಗಳೂರು ವಿಭಾಗದಿಂದ ಹೆಮ್ಮೆಯ ಪ್ರಶಸ್ತಿಯನ್ನು ಪಡಕೊಂಡಿರುತ್ತದೆ. ಈ ವಿಭಾಗವು 5 ಜಿಲ್ಲೆಗಳನ್ನೊಳಗೊಂಡಿರುತ್ತದೆ. ಪ್ರಶಸ್ತಿ ವಿತರಣಾ ಕಾರ್ಯಕ್ರಮವು ದಿನಾಂಕ: 19.01.2015 ರಲ್ಲಿ ವ್ಯಾಲಿ ವ್ಯೂ ಹೊಟೇಲ್, ಮಣಿಪಾಲದಲ್ಲಿ ಜರುಗಿದ್ದು ಐ.ಓ.ಸಿಯ ಮಹಾಪ್ರಬಂಧಕರಾದ ಶ್ರೀಮೋನಿ ಇವರು ಉಪಸ್ಥಿತರಿದ್ದು, ಸಂಸ್ಥೆಯ ಪರವಾಗಿ ಅಧ್ಯಕ್ಷರಾದ ಶ್ರೀ ಯಶ್‍ಪಾಲ್.ಎ.ಸುವರ್ಣ ರವರು ಪ್ರಶಸ್ತಿ ಸ್ವೀಕರಿಸಿದರು.

 

ರಾಜೀವ ಗಾಂಧಿ ಎಕ್ಸ್‍ಲೆನ್ಸ್ ಅವಾರ್ಡ್: ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಮಂಗಳೂರು, ಇದರ ಅಧ್ಯಕ್ಷರಾದ ಶ್ರೀ ಯಶ್‍ಪಾಲ್.ಎ.ಸುವರ್ಣರವರಿಗೆ

 

ಮಹೋನ್ನತ ಸಾಧನೆಗಾಗಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯಶ್‍ಪಾಲ್.ಎ.ಸುವರ್ಣರವರು ರಾಜೀವ ಗಾಂಧಿ ಎಕ್ಸಲೆನ್ಸ್ ಅವಾರ್ಡ್‍ನ್ನು ಇಂಟರ್ ನ್ಯಾಷನಲ್ ಬಿಸಿನೆಸ್ ಕೌನ್ಸಿಲ್, ನವದೆಹಲಿ ಇವರಿಂದ ಪಡಕೊಳ್ಳುತ್ತಿರುವುದು.

 

ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್, ರಾಷ್ಟ್ರೀಯಮಟ್ಟದ ಪ್ರಶಸ್ತಿಯನ್ನು ಪಡಕೊಂಡಿರುತ್ತದೆ.

ವಾಣಿಜ್ಯ ಮತ್ತು ಕೈಗಾರಿಕೆಗಳಿಗಾಗಿರುವ ಭಾರತೀಯ ಸಂಸ್ಥೆಯು“Indian Achievers Award For Cooperative Society Development” ಪ್ರತಿಷ್ಠಿತ ಪ್ರಶಸ್ತಿಯನ್ನು ಸಹಕಾರಿ ರಂಗದಲ್ಲಿ ಗುಣಮಟ್ಟದ ಸೇವೆಗಾಗಿ ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‍ಗೆ ನೀಡಿರುತ್ತದೆ. ಈ ಪ್ರಶಸ್ತಿಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಯಶ್‍ಪಾಲ್.ಎ.ಸುವರ್ಣರವರು ದಿನಾಂಕ: 27.08.2012 ರಂದು ಸ್ಪೀಕರ್ ಹಾಲ್, ಕಾನ್ಸ್‍ಸ್ಟಿಟ್ಯೂಶನ್ ಕ್ಲಬ್, ವಿಠಲ್ ಭಾಯ್ ಪಟೇಲ್ ಹೌಸ್, ರಫಿ ರಸ್ತೆ, ನವದೆಹಲಿ ಇಲ್ಲಿ ಸ್ವೀಕರಿಸಿದರು. 2012ರಲ್ಲಿ ಅಂತರಾಷ್ಟ್ರೀಯ ಸಹಕಾರ ವರ್ಷ ಎಂದು ಘೋಷಿಸಿದ ವರ್ಷದಲ್ಲಿಯೇ ಈ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯ. ಶ್ರೀ ಹರೀಶ್ ರಾವತ್ , ಸಂಸದೀಯ ವ್ಯವಹಾರ ಖಾತೆಗಳ ರಾಜ್ಯ ಸಚಿವರು, ಶ್ರೀ ವಾವೆನ್ ವಿಲಿಯಂ ಸೆಷಲ್ಸ್ ರಿಪಬ್ಲಿಕ್‍ನ ಹೈ ಕಮಿಷನರ್, ಶ್ರೀ ಪ್ರದೀಪ್ ತಂಪ್ಟ್ವ, ಲೋಕಸಭಾ ಸದಸ್ಯರು, ಸರ್ದಾರ್ ಜೋಗಿಂದರ್ ಸಿಂಗ್ ಐ.ಪಿ.ಎಸ್ , ಮಾಜಿ ಸಿಬಿಐ ನಿರ್ದೇಶಕರು, ಶ್ರೀ ವಿ.ಬಿ ಸೋನಿ, ಮಾಜಿ ಭಾರತೀಯ ರಾಯಭಾರಿ, ಶ್ರೀ ಅನೀಸ್ ದುರಾನಿ, ಅಖಿಲ ಭಾರತ ಕಾಂಗ್ರೇಸ್ ಸಮಿತಿಯ ಕಾರ್ಯದರ್ಶಿ, ಶ್ರೀ ಹರಿಪಾಲ್ ರಾವತ್, ಕಾರ್ಯದರ್ಶಿ, ಡೆಲ್ಲಿ ಪ್ರದೇಶ್ ಕಾಂಗ್ರೇಸ್ ಸಮಿತಿ, ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು..

 

2010-11 ರಲ್ಲಿ ಐ.ಓ.ಸಿ.ಯ ಗೋಲ್ಡ್ ಸರ್ಕಲ್‍ನ ಪ್ರತಿಷ್ಠಿತ ಸದಸ್ಯತ್ವ ಪಡೆದ ಬಗ್ಗೆ ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಮಂಗಳೂರು, ಸರ್ಟಿಫಿಕೇಟ್ ಆಫ್ ಎಕ್ಸಲೆನ್ಸ್ ಪ್ರಶಸ್ತಿ ಪಡೆಯುತ್ತಿರುವುದು.