ದೂರವಾಣಿ ಸಂಖ್ಯೆ: 0824- 2416511
ಇಮೇಲ್:fishmarkfedn@gmail.com
ಅಧಿಸೂಚನೆಗಳು
        Contract Recruitment

ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನಿಯಮಿತಕ್ಕೆ ಸ್ವಾಗತ:

ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿ ಹೊಂದಿರುವ ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ 1954 ರಲ್ಲಿ ಸ್ಥಾಪನೆಯಾಯಿತು. ದಿI ಆರ್.ಡಿ. ಮೆಂಡನ್ ಇವರು ಸ್ಥಾಪಕಾಧ್ಯಕ್ಷರಾಗಿ , ದಿI ಎಸ್.ಕೆ. ಅಮೀನ್ ಮಾಜಿ ಶಾಸಕರು ಸ್ಥಾಪಕ ಕಾರ್ಯದರ್ಶಿಯಾಗಿದ್ದರು. ಫೆಡರೇಶನ್ ರೂ. 3.03 ಕೋಟಿ ಪಾಲು ಬಂಡವಾಳ ಹೊಂದಿದ್ದು ಇದರಲ್ಲಿ ರೂ. 2.27 ಕೋಟಿ ಕರ್ನಾಟಕ ಸರಕಾರದ್ದು, ರೂ. 5.78 ಲಕ್ಷ ಸದಸ್ಯ ಸಹಕಾರಿ ಸಂಘಗಳದ್ದು ಮತ್ತು ರೂ. 69 ಲಕ್ಷ ವೈಯಕ್ತಿಕ ಸದಸ್ಯ ಮೀನುಗಾರರದ್ದಾಗಿರುತ್ತದೆ.

ಫೆಡರೇಶನ್‍ನಲ್ಲಿ ಕರ್ನಾಟಕ ಸರಕಾÀರವು ‘ಎ’ ಸದಸ್ಯತ್ವವನ್ನು ಹೊಂದಿದ್ದು, ಸುಮಾರು 80,000 ಸದಸ್ಯರನ್ನು ಹೊಂದಿರುವ 74 ಪ್ರಾಥಮಿಕ ಮೀನುಗಾರರ ಸಹಕಾರ ಸಂಘಗಳು ‘ಬಿ’ ವರ್ಗದ ಸದಸ್ಯತ್ವ , 13014 ವೈಯಕ್ತಿಕ ಸದಸ್ಯರು ‘ಸಿ’ ವರ್ಗದ ಸದಸ್ಯತ್ವ, ಮತ್ತು 7504 ‘ಡಿ’ ವರ್ಗ, 797 ‘ಇ’ ವರ್ಗದ ಸದಸ್ಯತ್ವ ಹೊಂದಿರುತ್ತಾರೆ.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮೀನುಗಾರರ ಮತ್ತು ಮೀನುಗಾರಿಕೆಯ ಅಭಿವೃದ್ಧಿ ಸಂಸ್ಥೆಯ ಆದ್ಯತೆಯಾಗಿದ್ದು, ಮೀನುಗಾರರ ವಿವಿಧ ಅಗತ್ಯಗಳನುಗುಣವಾಗಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಅಧ್ಯಕ್ಷರ ಸಂದೇಶ


ಯಶಪಾಲ. ಎ. ಸುವರ್ಣ

ಕರಾವಳಿಯು ಮತ್ಸ್ಯ ಸಂಪನ್ಮೂಲದ ರೂಪದಲ್ಲಿ ಅಗಾಧ ಸಾಗರ ಸಂಪತ್ತನ್ನು ಹೊಂದಿರುತ್ತದೆ. ಕರ್ನಾಟಕದ ವಿಶಾಲ ಕರಾವಳಿಯು ವಿಪುಲ ಮೀನುಗಾರಿಕೆಗೆ ಅವಕಾಶವನ್ನು ನೀಡಿದೆ. ರಾಜ್ಯದಲ್ಲಿ ಜೀವನೋಪಾಯಕ್ಕಾಗಿ ಮೀನುಗಾರಿಕೆಯನ್ನು ಅವಲಂಬಿಸಿರುವ ಮೀನುಗಾರರು ಬಹುಸಂಖ್ಯೆಯಲ್ಲಿದ್ದಾರೆ. ಇವರು ಸಾಂಪ್ರದಾಯಿಕ ಮೀನುಗಾರ ಸಮುದಾಯದವರಾಗಿದ್ದು,

ಮುಂದೆ ಓದಿ

ಸದಸ್ಯರಿಗೆ ಬ್ಯಾಂಕಿಂಗ್ ಸೇವೆ

ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಮೀನುಗಾರರ ವಿವಿಧ ಕಲ್ಯಾಣ ಕಾರ್ಯಕ್ರಮಗಳೊಂದಿಗೆ ಸದಸ್ಯರಿಗಾಗಿ ಬ್ಯಾಂಕಿಂಗ್ ಸೇವೆಯನ್ನು ಪರಿಚಯಿಸಿದೆ. ಸಂಸ್ಥೆಯು ಮೀನುಗಾರರಿಗೆ ಕೇಂದ್ರೀಕೃತ ಆರ್ಥಿಕ ಪರಿಹಾರವನ್ನು ನೀಡಲು ಶ್ರಮಿಸುತ್ತಿದೆ.

ಆಕರ್ಷಕ ಠೇವಣಿ ಯೋಜನೆಗಳು

ಸಾಲ ಸೌಲಭ್ಯ

ಆಕರ್ಷಕ ಬಡ್ಡಿದರ

ಇ-ಸ್ಟಾಂಪಿಂಗ್

ಆರ್‍ಟಿಜಿಎಸ್ /ನೆಫ್ಟ್

ಪಿಗ್ಮಿ ಸಂಗ್ರಹ

ಠೇವಣಿದಾರರಿಗೆ ವಿಶೇಷ ಬಡ್ಡಿ ದರಗಳು

ಮುಂದೆ ಓದಿ

ಉದ್ದೇಶಗಳು

  • ಸದಸ್ಯರಲ್ಲಿ ಮಿತವ್ಯಯ, ಸ್ವಾವಲಂಬನೆ ಮತ್ತು ಪರಸ್ಪರ ಸಹಕಾರವನ್ನು ಹೆಚ್ಚಿಸುವುದು.
  • ಸದಸ್ಯರಿಗೆ ಮೀನು ಮತ್ತು ಮೀನು ಉತ್ಪತ್ತಿಗಳ ಆಧಾರದ ಮೇಲೆ ಸಾಲವನ್ನು ಕೊಡುವುದು ಮತ್ತು ಯಾಂತ್ರಿಕ ದೋಣಿನಿರ್ಮಾಣ ಮತ್ತು ಸಂರಕ್ಷಣೆ ಸಾಲವನ್ನು ಒದಗಿಸುವುದು.
  • ಮೀನು ಮತ್ತು ಮೀನು ಉತ್ಪನ್ನಗಳ ಸಗಟು ಮತ್ತು ಚಿಲ್ಲರೆ ಮಾರಾಟವನ್ನು ದೇಶÀ ಮತ್ತು ವಿದೇಶಗಳಲ್ಲಿ ಏರ್ಪಾಡು ಮಾಡುವುದು.

ಮುಂದೆ ಓದಿ

ಚಟುವಟಿಕೆಗಳು

ಫೆಡರೇಶನ್ ಮಂಗಳೂರು ಮತ್ತು ಹಂಗಾರಕಟ್ಟೆ ಮೀನುಗಾರಿಕಾ ಬಂದರಿನಲ್ಲಿ ಸದಸ್ಯರ ಮೀನುಗಾರಿಕ ದೋಣಿಗಳ ಸಿಗಡಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿರುತ್ತದೆ. ಸಿಗಡಿಯನ್ನು ಸಂಸ್ಥೆಯು ಖರೀದಿಸಿ, ಸಿಗಡಿ ವರ್ತಕರಿಗೆ ನೀಡಲಾಗುತ್ತಿದೆ. ಸಂಸ್ಥೆಯು ಸಿಗಡಿ ವ್ಯಾಪಾರಿಗಳಿಂದ ಹಣವನ್ನು ಪಡೆದು ದೋಣಿ ಮಾಲಕರಿಗೆ ನೀಡುವ ಹೊಣೆಯನ್ನು ಹೊತ್ತುಕೊಂಡಿದೆ. ಸಂಸ್ಥೆಗೆ ಇದರಿಂದ ಶೇಕಡಾ 6 ರಷ್ಟು ಲಾಭ ಲಭಿಸುತ್ತದೆ. 2016-17 ರಲ್ಲಿ 380 ದೋಣಿಗಳ ರೂ. 6.03 ಕೋಟಿ ಮೌಲ್ಯದ ಸಿಗಡಿ ಮಾರಾಟವಾಗಿರುತ್ತದೆ.

ಮುಂದೆ ಓದಿ

ಸೇವೆಗಳು

ಫೆಡರೇಶನ್ ಡೀಸಿಲ್ ಸಾಗಾಟಕ್ಕೆ 4 ಟ್ಯಾಂಕರ್‍ಗಳನ್ನು ಹೊಂದಿದ್ದು ಪಣಂಬೂರು I.ಔ.ಅ ಟರ್ಮಿನಲ್‍ನಿಂದ ಮಲ್ಪೆ, ಮಂಗಳೂರು ಮೀನುಗಾರಿಕಾ ಬಂದರುಗಳಲ್ಲಿ ಸಂಸ್ಥೆಯ ಡೀಸಿಲ್ ವಿತರಣ ಕೇಂದ್ರಗಳಿಗೆ ಪೂರೈಕೆ ಮಾಡುತ್ತಿದೆ. ಅಲ್ಲಿ ಮೀನುಗರರ ಬೋಟ್‍ಗಳಿಗೆ ಡೀಸಿಲ್ ನೀಡಲಾಗುತ್ತಿದೆ.
ಫೆಡರೇಶನ್ ಮಂಗಳೂರು ಮತ್ತು ಹಂಗಾರಕಟ್ಟಾ ಕೇಂದ್ರಗಳಲ್ಲಿ ಸದಸ್ಯರ ಬೋಟ್‍ಗಳಿಂದ ಸಿಗಡಿ ಮಾರಟ ಮಾಡುತ್ತಿದೆ. ಬೋಟ್‍ಗಳಿಗೆ ಐಸ್‍ನ್ನು ಒದಗಿಸುತ್ತಿದೆ.

ಮುಂದೆ ಓದಿ

ಸುದ್ದಿಗಳು ಮತ್ತು ಕಾರ್ಯಕ್ರಮಗಳು

  • “ಮೀನುಗಾರಿಕೆ ವಲಯದಲ್ಲಿ ದೇಶೀಯ ಮಾರುಕಟ್ಟೆಗೆ ಉತ್ತೇಜನ”

    ದಿನಾಂಕ: 07.02.2024 ರಂದು ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿಯಲ್ಲಿ ಮೀನುಗಾರಿಕೆ ಸಚಿವಾಲಯ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ,

  • “ಪ್ರತಿಭಾಪುರಸ್ಕಾರ”

    ದಿನಾಂಕ: 26.01.2024 ರಂದು ಸಂಸ್ಥೆಯ ಮಲ್ಪೆ ಶಾಖೆಯ ಉಡುಪಿ ಕೇಂದ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ “ಪ್ರತಿಭಾಪುರಸ್ಕಾರ” ವಿತರಣಾ ಕಾರ್ಯಕ್ರಮವು ಏಳೂರು ಮೊಗವೀರ ಸಭಾಭವನ, ಮಲ್ಪೆ ಇಲ್ಲಿ ಜರಗಿತು.

ಮುಂದೆ ಓದಿ