ಡೀಸಿಲ್ ವಿತರಣೆ :
ಮೀನುಗಾರಿಕಾ ದೋಣಿಗಳಿಗೆ ಬೇಕಾಗುವ ಡೀಸಿಲ್‍ನ್ನು ಸಂಸ್ಥೆಯ ಮಂಗಳೂರು, ಹಂಗಾರಕಟ್ಟೆ, ಮಲ್ಪೆ, ಹೆಜಮಾಡಿ ಕೇಂದ್ರಗಳಲ್ಲಿರುವ ಡೀಸಿಲ್ ಬಂಕ್‍ಗಳ ಮೂಲಕ ಒದಗಿಸಲಾಗುತ್ತಿದೆ. 2016-17 ರಲ್ಲಿ ರೂ. 192.68 ಕೋಟಿ ಮೌಲ್ಯದ ಒಟ್ಟು 34480 ಕೆ.ಎಲ್ ಡೀಸಿಲ್‍ನ್ನು ವಿತರಿಸಲಾಗಿದೆ.
ಮೀನುಗಾರಿಕಾ ಸಲಕರಣೆಗಳ ಮಾರಾಟ :
ಮೀನುಗಾರಿಕೆ ನಡೆಸಲು ಅನುಕೂಲವಾಗುವ ಸಲಕರಣೆಗಳು ಮತ್ತು ಬಿಡಿ ಭಾಗಗಳನ್ನು ಪೂರೈಸುವ ಸಲುವಾಗಿ ಮೀನುಗಾರಿಕಾ ಸಲಕರಣೆಗಳು ಮತ್ತು ಬಿಡಿ ಭಾಗಗಳ ಮಳಿಗೆಗಳನ್ನು ಮಂಗಳೂರು, ಹಂಗಾರಕಟ್ಟೆ, ಹೆಜಮಾಡಿ, ಮಲ್ಪೆ, ಉಪ್ಪುಂದ, ಗಂಗೊಳ್ಳಿ ಕೇಂದ್ರಗಳಲ್ಲಿ ಸ್ಥಾಪಿಸಲಾಗಿದೆ. 2016-17ರಲ್ಲಿ ರೂ.98.81 ಲಕ್ಷ ಮೌಲ್ಯದ ಸಲಕರಣೆಗಳು ಮತ್ತು ಬಿಡಿ ಭಾಗಗಳನ್ನು ಮಾರಾಟ ಮಾಡಲಾಗಿದೆ.
ಸದಸ್ಯರಿಗೆ ಸಂರಕ್ಷಣಾ ಸಾಲ :
ಸಂಸ್ಥೆಯೊಂದಿಗೆ ಸಿಗಡಿ ವ್ಯವಹಾರದಲ್ಲಿರುವ ದೋಣಿ ಮಾಲಕರಿಗೆ ದೋಣಿ, ಬಲೆ, ಇಂಜಿನ್ ರಿಪೇರಿಗಾಗಿ ಮಂಗಳೂರು, ಹಂಗಾರಕಟ್ಟೆ ಕೇಂದ್ರಗಳಲ್ಲಿ ಸಂರಕ್ಷಣಾ ಸಾಲವನ್ನು ನೀಡಲಾಗುತ್ತಿದೆ. 2016-17 ರಲ್ಲಿ 93 ದೋಣಿ ಮಾಲಕರಿಗೆ ರೂ. 1.03 ಕೋಟಿ ಸಂರಕ್ಷಣಾ ಸಾಲವನ್ನು ನೀಡಲಾಗಿದೆ.
ಫೆಡರೇಶನ್ ವ್ಯವಹಾರ :
2016-17 ರಲ್ಲಿ ಫೆಡರೇಶನ್ ಒಟ್ಟು ವ್ಯವಹಾರವು ರೂ. 204.24 ಕೋಟಿಯಾಗಿದ್ದು, ವ್ಯವಹಾರ ಲಾಭವು ರೂ. 5.41 ಕೋಟಿ ಮತ್ತು ನಿವ್ವಳ ಲಾಭ ರೂ. 4.09 ಕೋಟಿಯಾಗಿರುತ್ತದೆ.