ದೂರವಾಣಿ ಸಂಖ್ಯೆ: 0824- 2416511
ಇಮೇಲ್:fishmarkfedn@gmail.com

ನಮ್ಮ ಬಗ್ಗೆ

ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿ ಹೊಂದಿರುವ ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ 1954 ರಲ್ಲಿ ಸ್ಥಾಪನೆಯಾಯಿತು. ದಿI ಆರ್.ಡಿ. ಮೆಂಡನ್ ಇವರು ಸ್ಥಾಪಕಾಧ್ಯಕ್ಷರಾಗಿ , ದಿI ಎಸ್.ಕೆ. ಅಮೀನ್ ಮಾಜಿ ಶಾಸಕರು ಸ್ಥಾಪಕ ಕಾರ್ಯದರ್ಶಿಯಾಗಿದ್ದರು. ಫೆಡರೇಶನ್ ರೂ. 3.03 ಕೋಟಿ ಪಾಲು ಬಂಡವಾಳ ಹೊಂದಿದ್ದು ಇದರಲ್ಲಿ ರೂ. 2.27 ಕೋಟಿ ಕರ್ನಾಟಕ ಸರಕಾರದ್ದು, ರೂ. 5.78 ಲಕ್ಷ ಸದಸ್ಯ ಸಹಕಾರಿ ಸಂಘಗಳದ್ದು ಮತ್ತು ರೂ. 69 ಲಕ್ಷ ವೈಯಕ್ತಿಕ ಸದಸ್ಯ ಮೀನುಗಾರರದ್ದಾಗಿರುತ್ತದೆ.

ಫೆಡರೇಶನ್‍ನಲ್ಲಿ ಕರ್ನಾಟಕ ಸರಕಾÀರವು ‘ಎ’ ಸದಸ್ಯತ್ವವನ್ನು ಹೊಂದಿದ್ದು, ಸುಮಾರು 1,20,000 ಸದಸ್ಯರನ್ನು ಹೊಂದಿರುವ 82 ಪ್ರಾಥಮಿಕ ಮೀನುಗಾರರ ಸಹಕಾರ ಸಂಘಗಳು ‘ಬಿ’ ವರ್ಗದ ಸದಸ್ಯತ್ವ , 13,357 ವೈಯಕ್ತಿಕ ಸದಸ್ಯರು ‘ಸಿ’ ವರ್ಗದ ಸದಸ್ಯತ್ವ, ಮತ್ತು 7675 ‘ಡಿ’ ವರ್ಗ, 2052 ‘ಇ’ ವರ್ಗದ ಸದಸ್ಯತ್ವ ಹೊಂದಿರುತ್ತಾರೆ.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮೀನುಗಾರರ ಮತ್ತು ಮೀನುಗಾರಿಕೆಯ ಅಭಿವೃದ್ಧಿ ಸಂಸ್ಥೆಯ ಆದ್ಯತೆಯಾಗಿದ್ದು, ಮೀನುಗಾರರ ವಿವಿಧ ಅಗತ್ಯಗಳನುಗುಣವಾಗಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.